ಕೋಲಾರ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿರುವ ಪೊಲೀಸರು ಪಿಎಫ್ಐ (PFI) ಮುಖಂಡರನ್ನು ಬಂಧಿಸಿದ್ದಾರೆ.
ಕೋಲಾರದ (Kolar) ಶಾಹಿನ್ ಷಾ ನಗರ (Shaheen Shah Nagar) ಸೇರಿದಂತೆ ವಿವಿಧೆಡೆಯಲ್ಲಿ ಪಿಎಫ್ಐ ಮುಖಂಡರ ಮನೆ ಮೇಲೆ, ಗಲಭೆ ಸೃಷ್ಟಿಗೆ ಯತ್ನ, ಅಕ್ರಮ ಕೂಟ, ಗಲಭೆಗೆ ಪ್ರಚೋದನೆ ಮಾಡಿದ ಆರೋಪದಡಿ ದಾಳಿ ನಡೆಸಿ ಏಳು ಜನರನ್ನು ಅರೆಸ್ಟ್ ಮಾಡಿದ್ದಾರೆ. ಇನ್ನೂ ಕೋಲಾರ ನಗರದ ನವಾಜ್ ಪಾಷಾ, ವಸೀಂ ಪಾಷಾ, ಸಿದ್ದಿಕ್ ಪಾಷಾ, ಇಂತಿಯಾಜ್ ಪಾಷಾ, ಶಾಬಾಜ್ ಪಾಷಾ ಹಾಗೂ ಅಲ್ಲಾಬಕಾಶ್ ಎಂಬವರನ್ನು ]ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.