ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪುಲ್ವಾಮಾದ ದ್ರಾಬ್ಗಾಮ್ ಪ್ರದೇಶದಲ್ಲಿ ಭಾರತೀಯ ಸೇನಾ ಪಡೆಯುವ ಎನ್ಕೌಂಟರ್ ನಡೆಸಿದ್ದು, ಮೂವರು ಭಯೋತ್ಪಾದಕರು ಮೃತಪಟ್ಟಿದ್ದಾರೆ.
ಉಗ್ರರ ಬಳಿ ಇದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ಇನ್ನೂ ಅನೇಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಹತ್ಯೆಗೀಡಾದ ಮೂವರು ಭಯೋತ್ಪಾದಕರು ಸ್ಥಳೀಯರಾಗಿದ್ದು, ಭಯೋತ್ಪಾದಕ ಸಂಘಟನೆ ಎಲ್ಇಟಿ ಜೊತೆ ನಂಟು ಹೊಂದಿದ್ದರು. ಅವರಲ್ಲಿ ಓರ್ವನನ್ನು ಜುನೈದ್ ಶೀರ್ಗೋಜ್ರಿ ಎಂದು ಗುರುತಿಸಲಾಗಿದೆ. ಮೇ 13 ರಂದು ನಮ್ಮ ಸಹೋದ್ಯೋಗಿ ಹುತಾತ್ಮ ರೆಯಾಜ್ ಅಹ್ಮದ್ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಹೇಳಿದ್ದಾರೆ.
Kashmir Zone Police
@KashmirPolice
#PulwamaEncounterUpdate: All three killed #terrorists are locals, linked with #terror outfit LeT. One of them has been identified as Junaid Sheergojri, involved in #killing of our colleague #Martyr Reyaz Ahmad on 13/5/22: IGP Kashmir @JmuKmrPolice
Kashmir Zone Police
@KashmirPolice
#PulwamaEncounterUpdate: 02 more #terrorists killed (Total 3). Identification & affiliation being ascertained. #Incriminating materials including arms & ammunition recovered. Search going on. Further details shall follow. @JmuKmrPolice
168
Reply
Copy link to Tweet
ಇದಕ್ಕೂ ಮುನ್ನ ಪುಲ್ವಾಮಾದ ದ್ರಾಬ್ಗಾಮ್ ಪ್ರದೇಶದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎನ್ಕೌಂಟರ್ ನಡೆಸಿ ಓರ್ವ ಭಯೋತ್ಪಾದಕನನ್ನು ಕೊಂದಿದ್ದರು. ಶನಿವಾರ ಸಂಜೆಯಿಂದಲೇ ಎನ್ಕೌಂಟರ್ ನಡೆಸಲು ಆರಂಭಿಸಲಾಗಿತ್ತು ಎಂದು ಕಾಶ್ಮೀರ್ ವಲಯ ಪೊಲೀಸರು ಟ್ವೀಟ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
#RSSTIMES