ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುನ್ನ ಮಾಧ್ಯಮಗಳೊಂದಿಗೆ ನಟ ವಿಶಾಲ್ ಕುಮಾರ್ ಮಾತಾಡಿದರು. ಪುನೀತ್ ನನಗೆ ಒಳ್ಳೆಯ ಸ್ನೇಹಿತ, ಯಾವಾಗಲೂ ಒಳ್ಳೆಯದನ್ನೇ ಮಾತಾಡುತ್ತಿದ್ದ. ಪುನೀತ್ ಹೆಸರು ಇನ್ನೂ 1000 ವರ್ಷ ನೆನಪಿರುವಂತ ಕೆಲಸಗಳನ್ನು ಮಾಡುತ್ತೇನೆ ಎಂದರು.
ನಾನು ಕೊಟ್ಟ ಮಾತಿನಂತೆ ಪುನೀತ್ ಕೆಲಸಗಳನ್ನು ಮುಂದುವರಿಸಿಕೊಂಡು ಹೊಗುತ್ತೇನೆ. ಪುನೀತ್ ನಮ್ಮನ್ನು ಅಗಲಿದ್ದು ಬೇಸರ ತರಿಸಿದೆ. ಪುನೀತ್ ನನ್ನ ಮಿತ್ರ, ಅವರು ಒಳ್ಳೆ ಮನುಷ್ಯ. ನನಗೆ ಪುನೀತ್ ದೊಡ್ಡ ಅಣ್ಣನ ತರ. ಅವರು ಎಷ್ಟು ಜನಕ್ಕೆ ಸಹಾಯ ಮಾಡಿದ್ದಾರೆ ಅಂತಾ ಇಡೀ ದೇಶಕ್ಕೆ ಗೊತ್ತಾಗಿದೆ. ಅವರು ನೋಡಿಕೊಳ್ಳುತ್ತಿದ್ದ ಓದಿಸುತ್ತಿದ್ದ ಮಕ್ಕಳ ಜವಬ್ದಾರಿ ಇದೆ. ಪುನೀತ್ ನನ್ನೊಂದಿಗೆ ಸದಾ ಒಳ್ಳೆ ವಿಷಯಗಳನ್ನು ಚರ್ಚೆ ಮಾಡುತ್ತಿದ್ದರು. ಪುನೀತ್ ತಾವು ಮಾಡಿದ ಕೆಲಸವನ್ನು ಯಾರಿಗೂ ಹೇಳಲು ಇಷ್ಟಪಡುತ್ತಿರಲಿಲ್ಲ. ಅವರ ಮಾನವೀಯ ಗುಣ, ಕೆಲಸ ಎಲ್ಲರು ಮೆಚ್ಚುವಂತದ್ದು. ಅವರ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಭರವಸೆ ನೀಡಿದರು.