Royal Challengers Bangalore vs Delhi Capitals: ಉಭಯ ತಂಡಗಳು ಇದುವರೆಗೆ ಐಪಿಎಲ್ನಲ್ಲಿ ಒಟ್ಟು 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 16 ಬಾರಿ ಗೆಲುವು ದಾಖಲಿಸಿದೆ. ಇನ್ನುಡೆಲ್ಲಿ ಕ್ಯಾಪಿಟಲ್ಸ್ ತಂಡ 11 ಪಂದ್ಯಗಳಲ್ಲಿ ಆರ್ಸಿಬಿಗೆ ಸೋಲುಣಿಸಿದೆ.
ದುಬೈನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2021) 56ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ (RCB vs DC) ವಿರುದ್ದ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್ನಲ್ಲಿ 5 ವಿಕೆಟ್ ಕಳೆದುಕೊಂಡು 164 ರನ್ ಕಲೆಹಾಕಿತು. ಈ ಬೃಹತ್ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿ ಪರ ಕೆಎಸ್ ಭರತ್ (78) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ (51) ಭರ್ಜರಿ ಬ್ಯಾಟಿಂಗ್ ಮಾಡಿದರು. ಅದರಂತೆ ಪಂದ್ಯವು ಕೊನೆಯ ಓವರ್ನ ಕೊನೆಯ ಎಸೆತಕ್ಕೆ ತಲುಪಿತು. ಕೊನೆಯ ಎಸೆತದಲ್ಲಿ 5 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ಅವೇಶ್ ಖಾನ್ ಎಸೆತಕ್ಕೆ ಸಿಕ್ಸ್ ಸಿಡಿಸುವ ಮೂಲಕ ಭರತ್ ಆರ್ಸಿಬಿಗೆ ರೋಚಕ ಜಯ ತಂದುಕೊಟ್ಟರು.
DC 164/5 (20)
RCB 166/3 (20)
ಉಭಯ ತಂಡಗಳು ಇದುವರೆಗೆ ಐಪಿಎಲ್ನಲ್ಲಿ ಒಟ್ಟು 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 16 ಬಾರಿ ಗೆಲುವು ದಾಖಲಿಸಿದೆ. ಇನ್ನುಡೆಲ್ಲಿ ಕ್ಯಾಪಿಟಲ್ಸ್ ತಂಡ 11 ಪಂದ್ಯಗಳಲ್ಲಿ ಆರ್ಸಿಬಿಗೆ ಸೋಲುಣಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ರಿಪಲ್ ಪಟೇಲ್, ಶಿಮ್ರಾನ್ ಹೆಟ್ಮೆಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡ, ಅವೇಶ್ ಖಾನ್, ಅನ್ರಿಕ್ ನೋಕಿಯಾ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್, ಡೇನಿಯಲ್ ಕ್ರಿಶ್ಚಿಯನ್, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹಮದ್, ಹರ್ಷಲ್ ಪಟೇಲ್, ಜಾರ್ಜ್ ಗಾರ್ಟನ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್
- 08 OCT 2021 23:10 PM (IST)ಕೊನೆಯ ಎಸೆತದಲ್ಲಿ ಸಿಕ್ಸ್: ಆರ್ಸಿಬಿಗೆ ರೋಚಕ ಜಯDC 164/5 (20)RCB 166/3 (20)
- 08 OCT 2021 23:05 PM (IST)ಕೊನೆಯ ಓವರ್ಅವೇಶ್ ಖಾನ್ ಮೊದಲ ಎಸೆತದಲ್ಲಿ ಮ್ಯಾಕ್ಸ್ವೆಲ್ ಬೌಂಡರಿಅರ್ಧಶತಕ ಪೂರೈಸಿದ ಮ್ಯಾಕ್ಸ್ವೆಲ್RCB 157/3 (19.3)
- 08 OCT 2021 23:02 PM (IST)ಕೊನೆಯ ಓವರ್ನಲ್ಲಿ 15 ರನ್ಗಳ ಅವಶ್ಯಕತೆRCB 150/3 (19)
- 08 OCT 2021 22:58 PM (IST)2 ಓವರ್ನಲ್ಲಿ 19 ರನ್ಗಳ ಅವಶ್ಯಕತೆಕ್ರೀಸ್ನಲ್ಲಿ ಮ್ಯಾಕ್ಸ್ವೆಲ್-ಭರತ್ ಬ್ಯಾಟಿಂಗ್
- 08 OCT 2021 22:55 PM (IST)ಮ್ಯಾಕ್ಸ್ವೆಲ್ ಅಬ್ಬರಅವೇಶ್ ಖಾನ್ ಎಸೆತದಲ್ಲಿ ಮ್ಯಾಕ್ಸ್ವೆಲ್ ಬೌಂಡರಿ RCB 146/3 (18)
- 08 OCT 2021 22:50 PM (IST)ಭರತ್ ಸಿಕ್ಸ್ರಬಾಡ ಎಸೆತಕ್ಕೆ ಸಿಕ್ಸ್ ಸಿಡಿಸಿದ ಕೆಎಸ್ ಭರತ್ RCB 134/3 (17)
- 08 OCT 2021 22:48 PM (IST)ಮ್ಯಾಕ್ಸಿ ಫೋರ್ರಬಾಡ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಮ್ಯಾಕ್ಸ್ವೆಲ್
- 08 OCT 2021 22:44 PM (IST)4 ಓವರ್ನಲ್ಲಿ 46 ರನ್ಗಳ ಅವಶ್ಯಕತೆRCB 119/3 (16)
- 08 OCT 2021 22:42 PM (IST)ಅರ್ಧಶತಕ ಪೂರೈಸಿದ ಭರತ್30 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ ಭರತ್
- 08 OCT 2021 22:39 PM (IST)ಮ್ಯಾಕ್ವೆಲ್ ಅಬ್ಬರನೋಕಿಯಾ ಓವರ್ನಲ್ಲಿ ಎರಡು ಬೌಂಡರಿ ಬಾರಿಸಿದ ಮ್ಯಾಕ್ಸ್ವೆಲ್ RCB 108/3 (15)
- 08 OCT 2021 22:31 PM (IST)ಮ್ಯಾಕ್ಸ್ವೆಲ್ ಸ್ವಿಚ್ ಆನ್ಅಕ್ಷರ್ ಪಟೇಲ್ ಎಸೆತದಲ್ಲಿ ಸ್ವಿಚ್ ಶಾಟ್ ಬಾರಿಸಿದ ಗ್ಲೆನ್ ಮ್ಯಾಕ್ಸ್ವೆಲ್ಬ್ಯಾಕ್ ಟು ಬ್ಯಾಕ್ ಬೌಂಡರಿಯೊಂದಿಗೆ ಅಬ್ಬರಿಸುತ್ತಿರುವ ಮ್ಯಾಕ್ಸಿ RCB 95/3 (13.4)
- 08 OCT 2021 22:29 PM (IST)13 ಓವರ್ ಮುಕ್ತಾಯRCB 85/3 (13) ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್-ಭರತ್ ಬ್ಯಾಟಿಂಗ್
- 08 OCT 2021 22:24 PM (IST)ಭರತ್-ಹಿಟ್ಅಕ್ಷರ್ ಪಟೇಲ್ ಎಸೆತದಲ್ಲಿ ಭರತ್ ಸ್ಟ್ರೈಟ್ ಹಿಟ್ ಸಿಕ್ಸ್ RCB 74/3 (11.5)
- 08 OCT 2021 22:16 PM (IST)10 ಓವರ್ ಮುಕ್ತಾಯRCB 61/3 (10) ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್-ಭರತ್ ಬ್ಯಾಟಿಂಗ್
- 08 OCT 2021 22:14 PM (IST)ಎಬಿಡಿ ಔಟ್ಅಕ್ಷರ್ ಪಟೇಲ್ ಎಸೆತದಲ್ಲಿ ಎಬಿಡಿ ಭರ್ಜರಿ ಹಿಟ್…ಬೌಂಡರಿ ಲೈನ್ನಲ್ಲಿ ಶ್ರೇಯಸ್ ಅಯ್ಯರ್ ಉತ್ತಮ ಕ್ಯಾಚ್
- 08 OCT 2021 22:10 PM (IST)ಎಬಿಡಿ-ಬೌಂಡರಿರಿಪಲ್ ಪಟೇಲ್ ಎಸೆತದಲ್ಲಿ ಎಬಿಡಿ ಸ್ಟ್ರೈಟ್ ಹಿಟ್…ಫೋರ್ RCB 54/2 (9)
- 08 OCT 2021 22:04 PM (IST)ಎಬಿಡಿ ಅಬ್ಬರಅಶ್ವಿನ್ ಎಸೆತದಲ್ಲಿ ಎಬಿಡಿ ಭರ್ಜರಿ ಹೊಡೆತ…ಸಿಕ್ಸ್ RCB 48/2 (8)
- 08 OCT 2021 22:01 PM (IST)ಪವರ್ ಪ್ಲೇ ಮುಕ್ತಾಯಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಬೌಲಿಂಗ್ರಬಾಡ ಎಸೆತದಲ್ಲಿ ಎಬಿಡಿ ಬ್ಯಾಟ್ನಿಂದ ಲೆಗ್ ಸೈಡ್ನತ್ತ ಭರ್ಜರಿ ಬೌಂಡರಿ RCB 37/2 (6.5)
- 08 OCT 2021 21:46 PM (IST)3 ಓವರ್ ಮುಕ್ತಾಯRCB 11/2 (3) ಕ್ರೀಸ್ನಲ್ಲಿ ಎಬಿಡಿ-ಭರತ್ ಬ್ಯಾಟಿಂಗ್
- 08 OCT 2021 21:42 PM (IST)ವಿರಾಟ್ ಕೊಹ್ಲಿ ಔಟ್ಅನ್ರಿಕ್ ನೋಕಿಯಾ ಎಸೆತದಲ್ಲಿ ಬಿಗ್ ಹಿಟ್ಗೆ ಯತ್ನ…ಆಕಾಶದತ್ತ ಚಿಮ್ಮಿದ ಚೆಂಡು…ಕಗಿಸೊ ರಬಾಡ ಉತ್ತಮ ಕ್ಯಾಚ್..ವಿರಾಟ್ ಕೊಹ್ಲಿ (4) ಔಟ್
- 08 OCT 2021 21:40 PM (IST)2 ಓವರ್ ಮುಕ್ತಾಯRCB 6/1 (2) ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ-ಭರತ್ ಬ್ಯಾಟಿಂಗ್
- 08 OCT 2021 21:35 PM (IST)ದೇವದತ್ ಪಡಿಕ್ಕಲ್ ಔಟ್ಅನ್ರಿಕ್ ನೋಕಿಯಾ ಎಸೆತದಲ್ಲಿ ಅಶ್ವಿನ್ಗೆ ಕ್ಯಾಚ್ ನೀಡಿ ಹೊರನಡೆದ ಪಡಿಕ್ಕಲ್ (0) RCB 4/1 (1)
- 08 OCT 2021 21:33 PM (IST)ಮೊದಲ ಓವರ್ಬೌಲಿಂಗ್: ಅನ್ರಿಕ್ ನೋಕಿಯಾಆರಂಭಿಕರು: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್
- 08 OCT 2021 21:22 PM (IST)ಆರ್ಸಿಬಿ- ಟಾರ್ಗೆಟ್ 165