ಜಮಖಂಡಿ ತಾಲೂಕಿನ ಕೊಣ್ಣೂರ ಗ್ರಾಮ ಪಂಚಾಯಿತಿಯ ಗದಿಗೆಪ್ಪ ಎಂಬ ಚುನಾಯಿತ ಪ್ರತಿನಿಧಿ ಮೇಲೆ ನಿನ್ನೆ ದಿನ ಕೆಲವು ಜನ ಗುಂಡಾಗಿರಿ ಮಾಡಿ ತೀವ್ರವಾಗಿ ಹಲ್ಲೆ ಮಾಡಿದ್ದರಿಂದ ಜಮಖಂಡಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಬಂದು ಅಡ್ಮಿಟ್ ಆಗಿದ್ದಾರೆ . ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಪ್ರತಿನಿಧಿಗೆ ಕೆಲಸ ಮಾಡಲು ಅವಕಾಶ ಕೊಡದೆ ಅಲ್ಲಿರುವ ಪಿಡಿಓ ಬಿರಾದಾರ್ ಪಕ್ಷಪಾತ ಮಾಡಿ ಚುನಾಯಿತ ಪ್ರತಿನಿಧಿಗಳು ಪ್ರಮಾಣಿಕವಾಗಿ ಕೆಲಸ ಮಾಡುವ ಅವಕಾಶ ಕೊಡದೆ . ಸಭೆಗಳನ್ನು ವ್ಯವಸ್ಥಿತವಾಗಿ ನಡೆಸುವುದಿಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅವಕಾಶ ಕೊಡುತ್ತಿಲ್ಲ ಇದರ ಬಗ್ಗೆ ಪ್ರಶ್ನಿಸಿದ್ದಕ್ಕೆ ಅಧ್ಯಕ್ಷರ ಜೊತೆಗೂಡಿ ಪಿಡಿಒ ನನ್ನ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಗದಿಗೆಪ್ಪ ಆರೋಪಿಸಿದರು . ತಮ್ಮ ಸ್ವಂತ ಸ್ವಾರ್ಥಕ್ಕಾಗಿ ಬಿರಾದಾರ ಪಿ ಡಿ ಓ ಈ ರೀತಿ ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಹಲ್ಲೆ ಆಗುವುದಕ್ಕೆ ಕಾರಣರಾಗಿದ್ದಾರೆ ಎಂದರು . ಜಮಖಂಡಿಯ ಮಾಜಿ ಶಾಸಕರಾದ ಶ್ರೀಕಾಂತ್ ಕುಲಕರ್ಣಿ ಅವರು ಮಾತನಾಡಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ , ಹಾಗೂ ತಾಲೂಕ ಪಂಚಾಯತ್ ಕಾರ್ಯದರ್ಶಿಗಳಿಗೆ ಸಾರ್ವಜನಿಕರ ಮುಖಾಂತರ ಮನವಿ ಮಾಡುವುದೇನೆಂದರೆ ಬಿರಾದಾರ್ ಪಿ ಡಿ ಓ ಇವರನ್ನು ಅಮಾನತು ಮಾಡಬೇಕು ಈ ಪ್ರಕರಣದ ಬಗ್ಗೆ ವಿಚಾರಣೆ ಯಾಗಬೇಕು ಈ ರೀತಿ ಗುಂಡಾಗಿರಿ ಸಂಸ್ಕೃತಿ ಈ ಭಾಗದಲ್ಲಿ ಎಲ್ಲಿಯೂ ನಡೆಯಬಾರದು ಜನ ಜಾಗೃತವಾಗಿ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದರು .